ಈ ತರ ಸಪ್ಪೆ ಮುಖ ಮಾಡೋಕೆ ಹೇಳಿಕೊಳ್ಳುವಂಥ ಸಮಸ್ಯೆಗಳೇನೂ ಇಲ್ಲ ನನಗೆ ... ಅಸಲಿಗೆ ಸಮಸ್ಯೆಗಳೇ ಇಲ್ಲ ... ಓದಿನಲ್ಲಾಗಲೀ ವೈಯುಕ್ತಿಕ ಬದುಕಿನಲ್ಲಾಗಲೀ ನಾನಂದುಕೊಂಡಿದೆಲ್ಲ ನಾನಂದುಕೊಂಡ ಹಾಗೆ ನಡೀತಾ ಇದೆ ...My life is almost perfect... ಆದರೂ ಎಲ್ಲೋ ಏನೋ ಸರಿಯಲ್ಲ ಅನ್ನೋ ಅತೃಪ್ತಿ ಇತ್ತೀಚಿಗೆ ನನ್ನ ಕೊರಿತಾ ಇದೆ... ಗುಂಪಿನಲ್ಲಿದ್ದಾಗೂ ಒಬ್ಬಂಟಿ ಅಂತ ಅನ್ನಿಸ್ತಾ ಇದೆ ...... ಆಕಾಶಕ್ಕೆ ಏಣಿ ಹಾಕುವ ಭರದಲ್ಲಿ ನನ್ನ ನಾ ಎಲ್ಲೋ ಕಳೆದುಕೊಳ್ತಾ ಇದ್ದೀನಿ ಅಂತ ಭಯವಾಗ್ತಾ ಇದೆ .... ಮೈಯೂ ಭಾರ ಮನಸ್ಸೂ ಭಾರ.... ಮನಸು ಹೊಸದೇನನ್ನೋ ಹುಡುಕುತ್ತ ಇದೆ ..... ಅದೇನು ಅಂತ ಕಂಡು ಕೊಳ್ಳೋವರೆಗೂ ಈ ಚಡಪಡಿಕೆ ನಿಲ್ಲದು ...... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅನ್ನೋ ಕವಿ ವಾಣಿ ಈ ಕ್ಷಣಕ್ಕೆ ನಿಜವೆನಿಸಿದೆ !