Sunday, 4 September 2011

ಇರುವುದೆಲ್ಲವ ಬಿಟ್ಟು......


      ಇವತ್ತು ನನ್ನ ಹುಟ್ಟಿದ ಹಬ್ಬ .... ಮಾಮೂಲಿ ಕೇಕ್  ಕತ್ತರಿಸಿದ್ದು , ದೇವಸ್ಥಾನಕ್ಕೆ ಹೋಗಿದ್ದು ಇತ್ಯಾದಿ ಕಾರ್ಯಕ್ರಮಗಳು ಸಾಂಗವಾಗೇ ನಡೆದವು .....ತುಂಬಾ ದಿನಗಳ ನಂತರ ನನ್ನ ಪ್ರೀತಿ ಪಾತ್ರರ ಜೊತೆಗೆ ಬಿಡುವು ಮಾಡಿಕೊಂಡು ಕಾಲ ಕಳೆದೆ ......ನಾನು ತುಂಬಾ ಸಂತೋಷಾಗಿರಬೇಕಾಗಿತ್ತು ಈ ದಿನ..... ಆದರೆ ಹಾಗಾಗಲಿಲ್ಲ  ...... ಏನೋ ಒಂಥರಾ ಬೇಜಾರು... 
     ಈ ತರ ಸಪ್ಪೆ ಮುಖ ಮಾಡೋಕೆ ಹೇಳಿಕೊಳ್ಳುವಂಥ ಸಮಸ್ಯೆಗಳೇನೂ ಇಲ್ಲ ನನಗೆ ...  ಅಸಲಿಗೆ  ಸಮಸ್ಯೆಗಳೇ ಇಲ್ಲ ... ಓದಿನಲ್ಲಾಗಲೀ ವೈಯುಕ್ತಿಕ ಬದುಕಿನಲ್ಲಾಗಲೀ ನಾನಂದುಕೊಂಡಿದೆಲ್ಲ ನಾನಂದುಕೊಂಡ ಹಾಗೆ ನಡೀತಾ ಇದೆ ...My life is almost perfect... ಆದರೂ ಎಲ್ಲೋ ಏನೋ ಸರಿಯಲ್ಲ ಅನ್ನೋ ಅತೃಪ್ತಿ ಇತ್ತೀಚಿಗೆ ನನ್ನ ಕೊರಿತಾ ಇದೆ... ಗುಂಪಿನಲ್ಲಿದ್ದಾಗೂ  ಒಬ್ಬಂಟಿ ಅಂತ ಅನ್ನಿಸ್ತಾ ಇದೆ ...... ಆಕಾಶಕ್ಕೆ ಏಣಿ ಹಾಕುವ ಭರದಲ್ಲಿ ನನ್ನ ನಾ ಎಲ್ಲೋ ಕಳೆದುಕೊಳ್ತಾ ಇದ್ದೀನಿ ಅಂತ ಭಯವಾಗ್ತಾ  ಇದೆ .... ಮೈಯೂ ಭಾರ ಮನಸ್ಸೂ ಭಾರ....  ಮನಸು ಹೊಸದೇನನ್ನೋ ಹುಡುಕುತ್ತ ಇದೆ ..... ಅದೇನು ಅಂತ  ಕಂಡು ಕೊಳ್ಳೋವರೆಗೂ ಈ ಚಡಪಡಿಕೆ ನಿಲ್ಲದು ...... ಇರುವುದೆಲ್ಲವ ಬಿಟ್ಟು  ಇರದುದರೆಡೆಗೆ ತುಡಿವುದೇ ಜೀವನ  ಅನ್ನೋ ಕವಿ ವಾಣಿ ಈ ಕ್ಷಣಕ್ಕೆ  ನಿಜವೆನಿಸಿದೆ !   

8 comments:

  1. ಹುಟ್ಟು ಹಬ್ಬದ ಶುಭಾಶಯಗಳು
    ನಾವು ಕೂಡ ಮಂಗಳೂರು ನಿಂದ

    ReplyDelete
  2. This comment has been removed by the author.

    ReplyDelete
  3. sorry for late wishes

    huttida habbada haardika shubhaashayagalu

    keep writing

    ReplyDelete
  4. Hi huttu habbada shubashayagalu. tadavaagi heltidini bejaar maadkobedi. bekaadre idu next year huttu habbakke munchitavaagi wish madiddini anta andkolli.:)
    Iruvudellavabittu iradudaredege tudivude jeevana idu ellara jeevanake avalambisuva satya.

    dayavittu nanna blog nodi nimma anisike tilisi.
    http://rakeshashapur.blogspot.com

    ReplyDelete
  5. ಆಶಾಪುರ ಅವರೇ,
    ಧನ್ಯವಾದಗಳು ,ನೀವು ಕೂಡ ನನ್ನ ಹಾಗೆ ಬ್ಲಾಗ್ ಲೋಕಕ್ಕೆ ಹೊಸಬರು ,ಹೀಗೆ ಬರೀತಾ ಇರಿ :) ಹಾಗೇ ಆಗಾಗ ನನ್ನ ಬ್ಲಾಗ್ ಗೆ ಭೇಟಿ ಕೊಡ್ತಾ ಇರಿ :)

    ReplyDelete