Friday 28 April 2017

A NEW BEGINING

Hi 
   I vent been back here for five years . I feel as though I ve lost myself in hurry of settling down or establishing my career or whateva. I thought life was good . I was earning well , lived in a big city alone ,had some decent friends   but somewhere along the way I ve become cynic
This was not how I was five years ago . I miss that girl . I wish i could still see this world with rose tinted glasses .I am on my quest to find that girl again . Lets see what happens.
  P.S.: its good too see that few of my favourite bloggers are still going on , keep up the good work friends:)

Monday 3 October 2011

"ನಿನ್ನೆ ನೀವು ಎನ್ಮಾಡಿದ್ರಿ?"

      ಇವತ್ತು ಪಾಠ ಕೊಂಚ ಬೇಗನೆ ಮುಗಿದಿತ್ತು ..... ಹಾಜರಿ ಹಾಕಿದ ನಂತರ ನಮ್ಮ ಅಧ್ಯಾಪಕರು ಹೀಗಂತ  ಕೇಳಿದರು :

                                "ನಿನ್ನೆ ನೀವು ಎನ್ಮಾಡಿದ್ರಿ?"

       ತರಹಾವೇರಿ ಉತ್ತರಗಳು ಬಂದವು 
        - ನಿನ್ನೆ ಭಾನುವಾರವಾದ್ದರಿಂದ ನಿದ್ದೆ ಮಾಡಿದೆ .
        -ಆಚೆ ಹೋಗಿದ್ದ್ದೆ .
        - ಸಿನಿಮಾ ನೋಡಿದೆ .. ಇತ್ಯಾದಿ ಇತ್ಯಾದಿ ......
      'ನಿನ್ನೆ ತಾರೀಕೆಷ್ಟು ?' ಎಂದರು ಅಧ್ಯಾಪಕರು ... 
      'ಅಕ್ಟೋಬರ್ ೨ ' ಎಂದೆವು .
     ಆ ಕ್ಷಣಕ್ಕೇ ಬಹುತೇಕರಿಗೆ ನೆನಪಾಗಿದ್ದು ನಿನ್ನೆ ಗಾಂಧಿ ಜಯಂತಿ ಅಂತ. ನಮ್ಮಂತಹ ವೃತ್ತಿ ಪರ ಕಾಲೇಜು ಗಳಲ್ಲಿ ಇಂತಹ ಸಮಾರಂಭಗಳಿಗೆ ಕರೆದರೂನು ಬರುವ ವಿದ್ಯಾರ್ಥಿಗಳು  ತುಂಬಾ ಕಡಿಮೆ ! ಗಾಂಧಿ ಜಯಂತಿ ಎಂದರೆ ನಮಗೊಂದು ರಜಾ ದಿನ ದಿನ ಮಾತ್ರ! ಈ ಬಾರಿ ಗಾಂಧಿ ಜಯಂತಿ ಭಾನುವಾರ ಬಂದಿದ್ದರಿಂದ ಅದು ಕೂಡ ಜ್ಞಾಪಕವಿರಲಿಲ್ಲ. 
     ' ಗಾಂಧಿ ಜಯಂತಿಯನ್ನು ಯಾರು ಯಾರು ಹೇಗೆ ಹೇಗೆ ಆಚರಿಸಿದಿರಿ' ಎಂದರು .
     ' ................. '
   ಮುಖ ಕೆಳಗೆ ಹಾಕಿ ಕೂತೆವು . ಒಬ್ಬರಿಂದಲೂ ಉತ್ತರವಿಲ್ಲ !  
      'ಒಬ್ಬರೂ ಇಲ್ಲ್ಲವೇ? ' 
      ' ..................' 
     'ಯಾಕೆ  ?'
     ' ..................'
     'ಹೋಗಲಿ ಎಷ್ಟು ಜನರಿಗೆ ಈ ಬಗ್ಗೆ  ನೆನಪಿತ್ತು? ಪ್ರಾಮಾಣಿಕವಾಗಿ  ಹೇಳಿ' ಅಂದರು .
     ಮೇಲೆ ಎದ್ದಿದ್ದು ಬೆರಳೆಣಿಕೆಯ ಕೈ ಗಳು ಮಾತ್ರ .(ನೂರು ಜನರಿರುವ ತರಗತಿ ನಮ್ಮದು ). ನಮ್ಮ ಅಧ್ಯಾಪಕರ ಮುಖದಲ್ಲಿ ಬೇಸರದ ಭಾವ ಇಣುಕಿತು .
    'ಪಾಪ , ಇದನ್ನೆಲ್ಲಾ ನೆನಪಿಟ್ಟುಕೊಳ್ಳಲು ನಿಮಗೆ ಸಮಯವಾದರೂ ಎಲ್ಲಿ?!'
     ಎಲ್ಲರ ಮುಖದಲ್ಲೂ ಒಂಥರ ಅಪರಾಧಿ ಭಾವ .
   'ಹೋಗಲಿ ,ಕ್ಲಾಸ್ ಬಿಡಲು ಇನ್ನು ಸಮಯ ಇದೆ  ಗಾಂಧೀಜಿ ಅವರ ಬಗ್ಗೆ ನಿಮಗೇನು ಗೊತ್ತು ಹೇಳಿ ನೋಡೋಣ '.
    ಗಾಂಧಿಜಿಯವರ ಬಗ್ಗೆ ಶಾಲಾ ದಿನಗಳಲ್ಲಿ ಓದಿದ್ದನ್ನು ನೆನಪಿನ ಪುಟಗಳಿಂದ ಹೆಕ್ಕಿ ಹೆಕ್ಕಿ ಒಬ್ಬೊಬ್ಬರಾಗಿ ಹೇಳತೊಡಗಿದೆವು.. ಸದ್ಯ ಇಷ್ಟಾದರೂ ಗೊತ್ತಲ್ಲ ಇವರಿಗೆ ಎಂಬತ್ತಿತ್ತು ನಮ್ಮ ಗುರುಗಳ ಮುಖಭಾವ !
    'ನಮ್ಮ ದೇಶಕ್ಕೆ   ಸ್ವಾತಂತ್ರ್ಯ ತಂದು  ಕೊಟ್ಟವರು ಕೊಟ್ಟವರು ಗಾಂಧೀಜಿ . ನೀವೆಲ್ಲ ದೊಡ್ಡದಾಗಿ ಅವರ ಫೋಟೋಗೆ ಹಾರ ಹಾಕಿ ಭಾಷಣ ಮಾಡಿ ಅವರ ಜಯಂತಿಯನ್ನು ಆಚರಿಸಬೇಕು ಅಂತ ನಾ ಹೇಳ್ತಾ ಇಲ್ಲ . ಆದರೆ , ದೇಶದ ನವ ನಾಗರೀಕರು ನೀವು , ಕನಿಷ್ಠ ನೆನಪೂ ಇಲ್ಲದೆ ಹೋದರೆ ಹೇಗೆ ? ಇನ್ನು ಮೇಲಾದರೂ ಅವರ ಸರಳತೆ , ಶಿಸ್ತಿನಂತಹ ಕೆಲವು ಮೌಲ್ಯ ಗಳನ್ನು  ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅವರಿಗೆ ಸಲ್ಲಿಸುವ ನಿಜವಾದ ಗೌರವ.' ಅಂತ ಹೇಳಿ ಹೊರಟರು  ನಮ್ಮ ಗುರುಗಳು .

    



Sunday 4 September 2011

ಇರುವುದೆಲ್ಲವ ಬಿಟ್ಟು......


      ಇವತ್ತು ನನ್ನ ಹುಟ್ಟಿದ ಹಬ್ಬ .... ಮಾಮೂಲಿ ಕೇಕ್  ಕತ್ತರಿಸಿದ್ದು , ದೇವಸ್ಥಾನಕ್ಕೆ ಹೋಗಿದ್ದು ಇತ್ಯಾದಿ ಕಾರ್ಯಕ್ರಮಗಳು ಸಾಂಗವಾಗೇ ನಡೆದವು .....ತುಂಬಾ ದಿನಗಳ ನಂತರ ನನ್ನ ಪ್ರೀತಿ ಪಾತ್ರರ ಜೊತೆಗೆ ಬಿಡುವು ಮಾಡಿಕೊಂಡು ಕಾಲ ಕಳೆದೆ ......ನಾನು ತುಂಬಾ ಸಂತೋಷಾಗಿರಬೇಕಾಗಿತ್ತು ಈ ದಿನ..... ಆದರೆ ಹಾಗಾಗಲಿಲ್ಲ  ...... ಏನೋ ಒಂಥರಾ ಬೇಜಾರು... 
     ಈ ತರ ಸಪ್ಪೆ ಮುಖ ಮಾಡೋಕೆ ಹೇಳಿಕೊಳ್ಳುವಂಥ ಸಮಸ್ಯೆಗಳೇನೂ ಇಲ್ಲ ನನಗೆ ...  ಅಸಲಿಗೆ  ಸಮಸ್ಯೆಗಳೇ ಇಲ್ಲ ... ಓದಿನಲ್ಲಾಗಲೀ ವೈಯುಕ್ತಿಕ ಬದುಕಿನಲ್ಲಾಗಲೀ ನಾನಂದುಕೊಂಡಿದೆಲ್ಲ ನಾನಂದುಕೊಂಡ ಹಾಗೆ ನಡೀತಾ ಇದೆ ...My life is almost perfect... ಆದರೂ ಎಲ್ಲೋ ಏನೋ ಸರಿಯಲ್ಲ ಅನ್ನೋ ಅತೃಪ್ತಿ ಇತ್ತೀಚಿಗೆ ನನ್ನ ಕೊರಿತಾ ಇದೆ... ಗುಂಪಿನಲ್ಲಿದ್ದಾಗೂ  ಒಬ್ಬಂಟಿ ಅಂತ ಅನ್ನಿಸ್ತಾ ಇದೆ ...... ಆಕಾಶಕ್ಕೆ ಏಣಿ ಹಾಕುವ ಭರದಲ್ಲಿ ನನ್ನ ನಾ ಎಲ್ಲೋ ಕಳೆದುಕೊಳ್ತಾ ಇದ್ದೀನಿ ಅಂತ ಭಯವಾಗ್ತಾ  ಇದೆ .... ಮೈಯೂ ಭಾರ ಮನಸ್ಸೂ ಭಾರ....  ಮನಸು ಹೊಸದೇನನ್ನೋ ಹುಡುಕುತ್ತ ಇದೆ ..... ಅದೇನು ಅಂತ  ಕಂಡು ಕೊಳ್ಳೋವರೆಗೂ ಈ ಚಡಪಡಿಕೆ ನಿಲ್ಲದು ...... ಇರುವುದೆಲ್ಲವ ಬಿಟ್ಟು  ಇರದುದರೆಡೆಗೆ ತುಡಿವುದೇ ಜೀವನ  ಅನ್ನೋ ಕವಿ ವಾಣಿ ಈ ಕ್ಷಣಕ್ಕೆ  ನಿಜವೆನಿಸಿದೆ !   

Monday 23 May 2011

exam fever

    
Finally .....................! My study holidays ave began ..... I feel as though some one has put curfew in my hostel ....... Every one is busy  cramming the whole term 's syllabus in a matter of few days ......Few students have already  left for their homes packing all the books weighing around 8 -10 kgs.......... Few students are still roaming from department to department because of attendance shortage.......Every conversion starts with the qs about studies and ends with it...Tension is almost tangible in the air  ......Making it uncomfortable for me to step out of my room.....but then, this is the picture you  get during exam  in a girl's hostel , isn't it? I dint mean the guys wont study , but they wont appear as much stressed as the girls or at least they wont show it.......This makes a lot easier to hang around with them during exams.........

Time seems to be flying faster than ever...........No one seems to notice when the sun rises and when he sets........Dark circle around every one 's  eyes tells tale of insomnia that  is so infectious..........Many are loosing weight while some are gaining..........Me like every one else is doting on the adrenaline and caffeine............ Though i am confident enough ,there are the moments of doubts............ I just hope that i am going to crack this...... 

Wednesday 30 March 2011

ಒಂದು ಅಲ್ಪ ವಿರಾಮ ,

  ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಒಂದ್  ಸ್ವಲ್ಪ ದಿನ  ಪುಸ್ತಕ ಮುಟ್ಟಲು ಮನಸ್ಸೇ ಆಗೋದಿಲ್ಲ  .......ಸದ್ಯ ನನ್ನದೂ ಕೂಡ ಅದೇ ಪರಿಸ್ಥಿತಿ ........ 
ಕ್ಲಾಸ್ ಗೆ  ಹೋಗಲೂ  ಮನಸ್ಸಾಗದು ..........ಅದಕ್ಕೇನೆ ಕಾಲೇಜ್ ಗೆ ೨ ದಿನ ಚಕ್ಕರ್ ಹಾಕಿ ಊರಿಗೆ ಹೋಗ್ತಾ ಇದೀನಿ..
 ನಾನು ಮೂಲತಃ ಬೆಂಗಳೂರಿಗಳೇ ಅದರೂ  ಬೆಳದಿದ್ದೆಲ್ಲ  ಒಂದು ಕಡೆ ಘಟ್ಟಗಳನ್ನೂ ಇನ್ನೊಂದು ಕಡೆಗೆ ಕಡಲನ್ನೂ ಹೊಂದಿರುವ ಉತ್ತರ ಕನ್ನಡದಲ್ಲಿ  .............. ಅಪ್ಪ, ಅಮ್ಮ ಈಗಲೂ ಅಲ್ಲೇ ಇರೋದು ................ 
ಓದಿಗಾಗಿ ಪಟ್ಟಣ ಸೇರಿದರೂ  ಆ ಊರಿನ ಮೋಹ ಇನ್ನೂ ಬಿಟ್ಟಿಲ್ಲ ....  ಪುರಸೊತ್ತಾದಾಗಲೆಲ್ಲ   ಹೋಗ್ತಾನೆ ಇರ್ತಿನಿ ....
ಅಲ್ಲಿ ಕೆಲವು ದಿನ ಕಳೆದರೆ ಮತ್ತೆ ಈ ಓದಿನ  rat  race ನಲ್ಲಿ ಪಾಲ್ಗೊಳ್ಳಲು ನಾವ್ ರೆಡಿ  ;)   SO ........ ಅಲ್ಲಿಯವರೆಗೂ  ಒಂದು ಪುಟ್ಟ ಅಲ್ಪ ವಿರಾಮ  , ...........

 ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು ( ಮೂರ್ ದಿನ ಮುಂಚಿತವಾಗಿಯೇ ಹೇಳ್ತಾ  ಇದೀನಿ  ).... :)



Tuesday 8 March 2011

testing testing 123!!!

Hey...............
I ve decided to write a blog at last (i don know y just felt like doing it ).............
I intend to do it through out my life that now i ve started................
So you can hope me to bug you constantly with my blah blah blah  after2 weeks(y not before dat?!! coz i ve exams till den!).................
Tata till den ..............
take care always:)
                             -krutthivaasapriya